Kannamangala| ಅಭಿವೃದ್ಧಿ ಬ್ಯಾಡ ನಿಮಗೆ ಜನರ ದಂಡದ ಹಣ ಬೇಕು!?

Jagruthi Times Kannada
0

ನಮಸ್ಕಾರ ಕನ್ನಮಂಗಲ ಗ್ರಾಮ ಪಂಚಾಯಿತಿಯ ಅಧಿಕಾರಿಗಳೇ ನಿಮ್ಮ ದೃಷ್ಟಿಯಲ್ಲಿ ಇದೇನಾ ಅಭಿವೃದ್ಧಿ? ಜನರಿಂದ ದಂಡ ವಸೂಲಿಯನ್ನು ಮಾಡುತ್ತಿದ್ದೀರಾ ಅದಕ್ಕೆ ನಿಜವಾಗಿಯೂ ಸಂತೋಷವಿದೆ ಯಾಕಂತಂದರೆ ತಪ್ಪು ಮಾಡಿದವರಿಗೆ ಶಿಕ್ಷೆ ಕೊಡುವುದು ಆದ್ಯ ಕರ್ತವ್ಯವೇ ಅದರ ಜೊತೆಜೊತೆಗೆ ಬಂದ ಹಣದಿಂದ ಅಲ್ಲಿರುವಂತಹ ಸಮಸ್ಯೆಗಳಿಗೆ ಪರಿಹಾರ ಹುಡುಕಬೇಕು ಅದನ್ನು ಬಿಟ್ಟು ಬೇರೆ ಏನು ಮಾಡುತ್ತಿದ್ದೀರಿ? ಅಲ್ಲಿ ಇಲ್ಲಿಯವರೆಗೂ ಸುಮಾರು ಒಂದು ತಿಂಗಳಾಗಿರಬಹುದು ನಮ್ಮ ದೃಷ್ಟಿಯಿಂದ ನೋಡುವುದಾದರೆ ಎಷ್ಟು ಗುಬ್ಬು ವಾಸನೆ ಬರುತ್ತಿದೆ ಅಂದರೆ ಅಲ್ಲಿ ನಿಂತಿಕೊಳ್ಳುವುದಕ್ಕೂ ಸಾಧ್ಯವಾಗುವುದಿಲ್ಲ ಆ ರೀತಿಯಾಗಿದೆ ಇದನ್ನು ನೀವು ಸ್ವಚ್ಛಪಡಿಸಲು ಇನ್ನು ಎಷ್ಟು ದಿನಗಳು ಬೇಕು ಇದು ವೇಗ ನ್ಯೂಸ್ ಕನ್ನಡದ ಮುಖ್ಯ ಕಾರ್ಯವಾಗಿ ನಾವು ಕೈಗೆ ತೆಗೆದುಕೊಳ್ಳುತ್ತೇವೆ ಯಾಕೆಂದರೆ ಇದು ನಮ್ಮ ಸಮಸ್ಯೆಯಲ್ಲ ಇದು ಜನರ ಸಮಸ್ಯೆ ಇದನ್ನು ನೀವು ಕೂಡಲೇ ಪರಿಹರಿಸಬೇಕೆಂದು ಜೊತೆಜೊತೆಗೆ ತಾವು ಪರಿಹರಿಸುತ್ತೀರಿ ಎನ್ನುವ ನಂಬಿಕೆ ವಿಶ್ವಾಸ ನಮಗಿದೆ ಪರಿಹರಿಸದಿದ್ದರೂ ವೇಗ ನ್ಯೂಸ್ ಕನ್ನಡ ನಿರಂತರವಾಗಿ ಸುದ್ದಿಯನ್ನು ಮಾಡುತ್ತಲೇ ಇರುತ್ತದೆ. ನೀವು ಅಷ್ಟು ಬೇಗ ಅವರಿಗೆ ದಂಡ ವಿಧಿಸಲು ಯೋಚಿಸಿದ್ದೀರಿ ಅದಕ್ಕೆ ನಾವು ಖುಷಿ ಪಡುತ್ತೇವೆ ಅಭಿವೃದ್ಧಿ ಆಗದೇ ಇರುವಂತಹ ಸಂದರ್ಭದಲ್ಲಿ ನೀವು ದಂಡ ವಿಧಿಸಿ ಆ ದಂಡದ ಮೊತ್ತವನ್ನು ಏನು ಮಾಡುತ್ತಿದ್ದೀರಿ? ಇದನ್ನ ನಾವು ಕೇಳ್ತಾ ಇಲ್ಲ ಜನರು ಸಹ ಕೇಳ್ತಾ ಇದ್ದಾರೆ! ದಯವಿಟ್ಟು ಕೂಡಲೇ ಇದನ್ನು ಪರಿಶೀಲಿಸಿ ಇದಕ್ಕೆ ಮುಕ್ತಿ ಹೊಂದಿಸಿ.

ದರ್ಶನ್, ವೇಗ ನ್ಯೂಸ್ ಕನ್ನಡ, ಬೆಂಗಳೂರು

ಕಾಮೆಂಟ್‌‌ ಪೋಸ್ಟ್‌ ಮಾಡಿ

0ಕಾಮೆಂಟ್‌ಗಳು

ಕಾಮೆಂಟ್‌‌ ಪೋಸ್ಟ್‌ ಮಾಡಿ (0)

#buttons=(Ok, Go it!) #days=(20)

Our website uses cookies to enhance your experience. Check Now
Ok, Go it!