ಗ್ರಾಹಕರಿಗೆ ಅನುಕೂಲ ಒದಗಿಸಲು ಭಾರತೀಯ ರಾಷ್ಟ್ರೀಯ ಪಾವತಿ ನಿಗಮ ಯುಪಿಐ ಪಾವತಿ ಮಿತಿಯನ್ನು ಹೆಚ್ಚಳ ಮಾಡಿದೆ. ಸೆಪ್ಟೆಂಬರ್ 15 ರಿಂದ ಜಾರಿಯಾಗಲಿರುವ ಹೊಸ ನಿಯಮದ ಅನ್ವಯ ಗ್ರಾಹಕರು ಒಮ್ಮೆಲೆ ಯುಪಿಐ ಮೂಲಕ 5 ಲಕ್ಷ ರೂಪಾಯಿ ಕಳುಹಿಸಬಹುದು.
ಒಂದು ದಿನದಲ್ಲಿ 10 ಲಕ್ಷ ರೂಪಾಯಿವರೆಗಿನ ಮೊತ್ತವನ್ನು ಪಾವತಿಸಬಹುದಾಗಿದೆ. ಇದು ವ್ಯಕ್ತಿಯಿಂದ ವರ್ತಕರು ಅಥವಾ ಕಂಪನಿಗಳು ಮಾಡುವ ಪಾವತಿಗಳಿಗೆ ನಿರ್ಧಿಷ್ಟ 12 ವ್ಯವಹಾರಗಳಿಗೆ ಮಾತ್ರ ಅನ್ವಯವಾಗಲಿದೆ.
ವ್ಯಕ್ತಿಯಿಂದ ವ್ಯಕ್ತಿಗೆ ಕಳುಹಿಸುವ ಹಣಕ್ಕೆ ಪ್ರತಿದಿನ ಗರಿಷ್ಠ ಒಂದು ಲಕ್ಷ ರೂಪಾಯಿ ಮಿತಿ ಮುಂದುವರೆಯಲಿದೆ. ವಿಮೆ, ಷೇರು ಮಾರುಕಟ್ಟೆ, ಸರ್ಕಾರಿ ಇ- ಮಾರ್ಕೆಟ್ ಪ್ಲೇಸ್, ಕ್ರೆಡಿಟ್ ಕಾರ್ಡ್ ಬಿಲ್ ಪಾವತಿ ಸೇರಿ ಒಟ್ಟು 12 ವ್ಯವಹಾರಗಳಿಗೆ ಹೆಚ್ಚುವರಿ ಪಾವತಿ ಮಿತಿ ಅನ್ವಯವಾಗಲಿದೆ ಎನ್ನಲಾಗಿದೆ.