ಸುಜಾತಾ ಭಟ್ ಡೆತ್ ನೋಟ್ ವೈರಲ್ : ಇದು ನಿಜವೋ.. ಸುಳ್ಳೋ..?
personJagruthi Times Kannada
ಆಗಸ್ಟ್ 22, 2025
0
share
ಧರ್ಮಸ್ಥಳ ಪ್ರಕರಣದಲ್ಲಿ ಸುಜಾತ್ ಬಟ್ ದಿನಕ್ಕೊಂದು ವಿವಾದಾತ್ಮಕ ಹೇಳಿಕೆ ನೀಡುತ್ತಿದ್ದಾರೆ. ಸುಜಾತಾ ಭಟ್ ಬರೆದಿದ್ದಾರೆ ಎಂದು ಹೇಳಲಾಗುತ್ತಿರುವ "ಡೆತ್ ನೋಟ್" ಇದೀಗ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಪತ್ರದಲ್ಲಿ "ಮಾಧ್ಯಮದವರ ಕಾಟ ತಾಳಲಾರದೆ ಆತ್ಮಹತ್ಯೆ ಮಾಡಿಕೊಂಡಿದ್ದೇನೆ" ಎಂದು ಉಲ್ಲೇಖವಿರುವುದು ಗಮನ ಸೆಳೆದಿದೆ.
ಪತ್ರ ವೈರಲ್ ಆಗುತ್ತಿದ್ದಂತೆಯೇ ಪೊಲೀಸರು ಅಲರ್ಟ್ ಆಗಿದ್ದಾರೆ. ಈ ಲೆಟರ್ ನಿಜಾನಾ ಅಥವಾ ಸುಳ್ಳಾ ಎಂಬುದರ ಕುರಿತು ಪೊಲೀಸರು ತನಿಖೆ ಪ್ರಾರಂಭಿಸಿದ್ದಾರೆ.