ಬೆಂಗಳೂರಿನಂತಹ ನಗರಗಳನ್ನು ಒಳಗೊಂಡು ರಾಜ್ಯದಲ್ಲಿ ವಾಯು ಮಾಲಿನ್ಯ ಪ್ರಮಾಣ ಹೆಚ್ಚಾಗುತ್ತಿದೆ. ಜೈವಿಕ ಇಂಧನ ಬಳಕೆ ಉತ್ತೇಜಿಸುವ ನಿಟ್ಟಿನಲ್ಲಿ ರಾಜ್ಯ ಜೈವಿಕ ಇಂಧನ ಅಭಿವೃದ್ಧಿ ಮಂಡಳಿ ಹೊಸ ಪ್ರಯತ್ನಕ್ಕೆ ಮುಂದಾಗಿದೆ. ಜೈವಿಕ ಇಂಧನವು ಮಾಲಿನ್ಯಕಾರಕವಲ್ಲ ಎಂದಿರುವ ಜೈವಿಕ್ ಇಂಧನ ಮಂಡಳಿಯು ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ (KSPCB) ಸಹಕಾರದಲ್ಲಿ ಅದನ್ನು ವೈಟ್ಕ ಕ್ಯಾಟಗರಿ ಪಟ್ಟಿಗೆ ಸೇರಿಸಲು ಕ್ರಮವಹಿಸಿದೆ.
ಪರಿಸರ ಸ್ನೇಹಿಯಾಗಿರುವ ಜೈವಿಕ ಇಂಧನವನ್ನು "ಮಾಲಿನ್ಯಕಾರಕವಲ್ಲ ಇಂಧನದ ಗುಂಪಿಗೆ" (ವೈಟ್‌ಕ್ಯಾಟಗರಿ) ಸೇರ್ಪಡೆ ಮಾಡುವ ನಿಟ್ಟಿನಲ್ಲಿ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಸಹಕಾರದೊಂದಿಗೆ ಕ್ರಮ ಕೈಗೊಳ್ಳಲಾಗುವುದು ಎಂದು ಜೈವಿಕ ಇಂಧನ ಅಭಿವೃದ್ಧಿ ಮಂಡಳಿಯ ಅಧ್ಯಕ್ಷ ಎಸ್.ಈ. ಸುಧೀಂದ್ರ ಹೇಳಿದರು.
ನಗರದಲ್ಲಿ ಬುಧವಾರ ರಾಜ್ಯ ಜೈವಿಕ ಇಂಧನ ಅಭಿವೃದ್ಧಿ ಮಂಡಳಿ ವತಿಯಿಂದ "ಜೈವಿಕ ಇಂಧನ ನೀತಿ ನಿರೂಪಣೆಯಲ್ಲಿನ ಬದಲಾವಣೆ ಹಾಗೂ ನಿಲುವುಗಳ'' ಕುರಿತು ಖಾಸಗಿ ಹೋಟೆಲ್‌ನಲ್ಲಿ ಆಯೋಜಿಸಲಾಗಿದ್ದ ಸಂವಾದದಲ್ಲಿ ಪಾಲ್ಗೊಂಡು ಮಾತನಾಡಿದರು. ಸಂವಾದದ ವೇಳೆ ಜೈವಿಕ ಇಂಧನವನ್ನು ರಾಜ್ಯದಲ್ಲಿ ಮಾಲಿನ್ಯಕಾರಕವಲ್ಲದ ಇಂಧನ (ವೈಟ್ ಕ್ಯಾಟಗರಿ)ಗೆ ಸೇರ್ಪಡೆ ಮಾಡುವ ಕುರಿತು ಸಂವಾದಕರೊಬ್ಬರು ಪ್ರಸ್ತಾಪಿಸಿದರು.
